ವಿಜಯಪುರ: ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ. ಅಂಬೇಡ್ಕರವರ ಸಂವಿಧಾನ ನಮಗೆಲ್ಲಾ ದಾರಿದೀಪ, ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲೂ ಸಾಧಿಸಿಲು ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ಕಾರಣವಾಗಿದೆ ಎಂದು ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ ಆರ್ ಪಾಟೀಲ್ ಹೇಳಿದರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಹಿನ್ನೆಲೆಯಲ್ಲಿ ಜಾಲಗೇರಿ ಗ್ರಾಮದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಪುತ್ಥಳಿಗೆ ಹೂಮಾಲೆ ಹಾಕಿ ಹೆಣ್ಣುಮಕ್ಕಳು ಆರತಿ ಬೆಳಗಿದರು. ಕಾಂಗ್ರೆಸ್ ಕಚೇರಿಯಲ್ಲೂ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಜಾಲಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಭೀಮೂ ಚವ್ಹಾಣ್, ಗ್ರಾಮ ಪಂಚಾಯತಿಯ ಸದಸ್ಯ ಈರು ಬಿರಾದರ್, ಸುಭಾಷ್ ಕಾಂಬಳೆ, ಯಮನಪ್ಪ ಕಾಂಬ್ಳೆ, ಶ್ರೀಮಂತ ಕಾಂಬ್ಳೆ, ಮನೋಹರ್ ಜಾದವ್, ಭೀಮು ಕಾಂಬ್ಳೆ, ಮಧು ಸಂದಿಮನಿ, ಸಿದ್ದು ಕಟ್ಟಿಮನಿ, ರಾಜು ಸಿಂಗೆ, ಎಚ್ ಎಂ ದೊಡ್ಮನಿ, ಶಿವನಗೌಡ ಪಾಟೀಲ,ದಸ್ಕಿರ್ ವಾಲಿಕಾರ ಉಪಸ್ಥಿತರಿದ್ದರು.