ವಿಜಯಪುರ: ಹಿಂದು ಸಂಪ್ರದಾಯದಂತೆ ಅಮೆರಿಕಾ ವಧು, ವಿಜಯಪುರದ ವರ ವಿಜಯಪುರ ನಗರದ ಟೌನ್ ಹಾಲ್ ನಲ್ಲಿ ಅದ್ಧೂರಿಯಾಗಿ ಮದುವೆಯಾದರು.
ಉತ್ತರ ಅಮೇರಿಕಾದ ಕೆನಡಾ ದೇಶದ ಸಾರಾ ಹಾಗೂ ವಿಜಯಪುರ ನಿವಾಸಿ ರವಿಕುಮಾರ್ ಚಿಮ್ಮಲಗಿ
ಕೆನಡಾದ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಜಯಪುರದ ವಿಶ್ವನಾಥ ಚಿಮ್ಮಲಗಿ, ಶೋಭಾ ದಂಪತಿ ಪುತ್ರ ರವಿಕುಮಾರ್, ಕೆನಡಾದ ರೋಜ್ಮೇರಿ ಪ್ಲಾಟ್, ಹ್ಯಾರಿ ಪೋಲಾರ್ಡ್ ದಂಪತಿ ಪುತ್ರಿ ಸಾರಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಎರಡು ಕುಟುಂಬಗಳು ಪರಸ್ಪರ ಒಪ್ಪಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಇನ್ನೂ
ಮದುವೆ ದಿನ ಸೀರೆ ಉಟ್ಟು ಭಾರತೀಯ ನಾರಿಯಂತೆ ಸಾರಾ ಮಿಂಚುತ್ತಿದ್ದರು.