ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 70 ವರ್ಷ ವಯೋಮಾನದ (ವೃದ್ಧೆ) ರೋಗಿ ಸಂಖ್ಯೆ 3448344 ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ. ಇವರು ತೀವ್ರ ಉಸಿರಾಟ ತೊಂದರೆ, ಹೊಟ್ಟೆ ನೋವು, ಎಚ್ಟಿಎನ್, ಟೈಪ್ ೨ ಡಯಾಬಿಟೀಸ್ ಸಂಬಂಧಿತ ಕಾಯಿಲೆಗಳಿಂದ ಬಳಲಿ, ದಿನಾಂಕ : 17-1-2022 ರಂದು ಗುಲ್ಬರ್ಗಾದಿಂದ ಆಗಮಿಸಿದ್ದ ಇವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 17-1-2022 ರಂದು ಮೃತಪಟ್ಟಿದ್ದಾರೆ. ಇವರು ಕೋವಿಡ್ ಲಸಿಕೆ ಡೋಸ್-1, ಡೋಸ್-2 ಪಡೆದುಕೊಂಡಿದ್ದರು. ಶಿಷ್ಟಾಚಾರದಂತೆ ಇವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.