ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೆ ಗಡಗಡ ಶುರುವಾಗಿದೆ.
ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಬೆಳಗ್ಗೆ 11.22ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ನಗರದ ರೇಲ್ವೆಸ್ಟೇಷನ್ ಏರಿಯಾ, ಗೋಳಗುಮ್ಮಟ, ಎಪಿಎಂಸಿ, ರಂಭಾಪೂರ, ಕವಲಗಿ ಸೇರಿದಂತೆ ಹಲವೆಡೆ ಲಘು ಭೂಕಂಪನ ಆಗಿದ್ದು, ಭೂಮಿ ಕಂಪಿಸಿದ ಅನುಭವದಿಂದ ಮತ್ತೆ ಜನತೆ ಆತಂಕಕ್ಕೊಳಗಾದಿದ್ದಾರೆ. ಅದಕ್ಕಾಗಿ ಸ್ಥಳಕ್ಕೆ ಜಿಲ್ಲಾಡಳಿತ, ಭೂ ಅಧಿಕಾರಿಗಳು ಭೇಟಿ ನೀಡುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ.