ವಿಜಯಪುರ: ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ ಆಗಿದೆ.
ವಿಜಯಪುರ ನಗರ ಗ್ಯಾಂಗ್ ಬಾವಡಿ ಸೇರಿದಂತೆ ವಿವಿಧೆಡೆ ಲಘು ಭೂಕಂಪನ ಆಗಿದ್ದು, ಬಸವನಗರ, ಕೀರ್ತಿ ನಗರ ಸೇರಿದಂತೆ ನಗರಾದ್ಯಂತ ಕಂಪನ ಅನುಭವ ಆಗಿದೆ. ಭೂಕಂಪನದಿಂದ ಮತ್ತೆ ನಗರದ ಜನತೆ ಭಯಭೀತರಾಗಿದ್ದಾರೆ. ಅದಕ್ಕಾಗಿ ಸ್ಥಳಕ್ಕೆ ಜಿಲ್ಲಾಡಳಿತ ಭೇಟಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.