ವಿಜಯಪುರ: ವಿಜಯಪುರದಲ್ಲಿ ಮತ್ತೆ ಭೂಕಂಪನ ಆಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಇನ್ನೂ ದೊಡ್ಡ ಸದ್ದಿನ ಜೊತೆಗೆ ಭೂಮಿ ನಡುಗಿದೆ.
ಅಲ್ಲದೇ, ಭೂಕಂಪನ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದವರು ದೃಢಪಡಿಸಿದ್ದಾರೆ. ನಗರದ ಹೊರ ವಲಯದ ಅಲಿಯಾಬಾದ್ನಲ್ಲಿ 2.5 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಭೂಮಿಯ 8 ಕಿ.ಮೀ ಆಳದಲ್ಲಿ ಭೂಕಂಪನ ಆಗಿದೆ. ಮೇಲಿಂದ ಮೇಲೆ ಭೂಕಂಪನದಿಂದ ಜನ ಭಯಭೀತರಾಗಿದ್ದಾರೆ.