ವಿಜಯಪುರ: ಕಳೆದ ಒಂದು ತಿಂಗಳಿಂದ ಭೂಕಂಪನದ ಅನುಭವ ಇಲ್ಲದೇ ನೆಮ್ಮದಿಯಾಗಿದ್ದ ಜಿಲ್ಲೆಯಜನತೆ ಕಳೆದ ತಡರಾತ್ರಿ ಹಾಗೂ ಇಂದು ಬೆಳಗ್ಗಿನ ಜಾವ ಮತ್ತೆ ಭೂಕಂಪನದ ಅನುಭವಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ.
ಕಳೆದ ಮೂರು ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಕಳೆದ ರಾತ್ರಿ *11.42ಕ್ಕೆ* ಹಾಗೂ ಇಂದು ಬೆಳಗ್ಗೆ *6.19ಕ್ಕೆ* ವಿಜಯಪುರ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ ಜನರಲ್ಲಿ ಆಗಿದೆ.
ಒಂದೇ ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ನಗರದ ರೇಲ್ವೆಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ಭೂ ಕಂಪನದ ಅನುಭವವಾಗಿದೆ. ಇನ್ನೂ ಈ ಬಗ್ಗೆ ಭೂಮಾಪನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಹ ಪರಿಶೀಲನೆ ನಡೆಸುತ್ತಿದೆ.