ವಿಜಯಪುರ: ಜಿಲ್ಲಾದ್ಯಂತ ಭೂಕಂಪನ ಹಿನ್ನಲೆ ಭೂಕಂಪನ ಅಧ್ಯಯನಕ್ಕಾಗಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ತಜ್ಞರ ತಂಡ ಭೇಟಿ ನೀಡಿದರು.
ವೈಜ್ಞಾನಿಕ ಅಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಆಧಿಕಾರಿ ರಮೇಶ ತಿಪ್ಪಾಲ ನೇತೃತ್ವದಲ್ಲಿ ಉಕ್ಕಲಿ ಗ್ರಾಮದಲ್ಲಿ ಸಭೆ ನಡೆಸಿದರು.
ಇನ್ನು ಸಭೆಯಲ್ಲಿ ಜನರಿಗೆ ಭೂಕಂಪನ ಬಗ್ಗೆ ಹಾಗೂ ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಆಧಿಕಾರಿಗಳು ಗ್ರಾಮದಲ್ಲಿ ಸಿಸ್ಮೋ ಮೀಟರ್ ಅಳವಡಿಸಿದ ತಜ್ಞ ಆಧಿಕಾರಿಗಳು
ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದರು. ಈ ವೇಳೆಯಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಆನಂದಕುಮಾರ ಸೇರಿದಂತೆ ಇತರರು ಆಧಿಕಾರಿಗಳು ಉಪಸ್ಥಿತರಿದ್ದರು.