ವಿಜಯಪುರ: ಅರಕೇರಿ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬೈಕ್ಗೆ(Bike) ಮಹಾರಾಷ್ಟ್ರದ(Maharashtra) ಸಾರಿಗೆ ಬಸ್(Bus) ಡಿಕ್ಕಿಯಾಗಿರುವ ಪರಿಣಾಮ ಬೈಕ್ ನಲ್ಲಿದ್ದ ಬಾಲಕಿ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಆಥಣಿ ತಾಲೂಕಿನ ವಡರಟ್ಟಿ ಗ್ರಾಮದ ಸವಿತಾ ಪೂಜಾರಿ (15) ಮೃತ ಬಾಲಕಿ. ಬಾಲಕಿ ತಂದೆ ಮುದಗೊಂಡಗೆ ಸಣ್ಣಪುಟ್ಟ ಗಾಯಗಳಾಗಿವೆ. ತಂದೆಯ ಜೊತೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಅರಕೇರಿ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅವಘಡ ಆಗಿದೆ. MH 13 – CU 6338 ನಂಬರಿನ ಮಹಾರಾಷ್ಟ್ರದ ಸರ್ಕಾರಿ ಬಸ್
ಬಸ್ ಸಮೇತ ಚಾಲಕನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/12/IMG-20231213-WA0066-462x1024.jpg)