ವಿಜಯಪುರ: ವಿಜಯಪುರ ನಗರದ ಗಗನಮಹಲ್ ಉದ್ಯಾನದ ಗಿಡವೊಂದರಲ್ಲಿ ಮಂಗಳವಾರ ಹಾವು ಹರಿದಾಡಿದ್ದು, ಹಕ್ಕಿಗಳು ಗಾಬರಿಗೊಂಡು ಚಿಲಿಪಿಲಿಗುಟ್ಟಿವೆ. ಇದರಿಂದ ಗಗನ್ಮಹಲ್ನಲ್ಲಿ ವಿಶ್ರಾಂತಕ್ಕೆ ಬಂದಿದ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ, ಕುತೂಹಲ ಕೆರಳಿಸುವಂತಾಗಿತ್ತು.
ಡಿಸಿ ಮನೆಯ ಅನತಿ ದೂರದ ಉದ್ಯಾನದ ರಸ್ತೆ ಪಕ್ಕದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ತಮ್ಮ ವಾಹನಗಳನ್ನು ನಿಲ್ಲಿಸಿ, ಗಿಡದಲ್ಲಿ ಹಾವನ್ನು ನೋಡುತ್ತ ನಿತಕೊಂಡಿದ್ದರು. ಅಲ್ಲದೇ, ವಾಹನ ದಟ್ಟಣೆ ಉಂಟಾಗಿದ್ದಕ್ಕೆ, ಪೊಲೀಸ್ ಸಿಬ್ಬಂದಿ ವಾಹನ ದಟ್ಟಣೆ ನಿಯಂತ್ರಿಸಿದರು. ಇದೇ ವೇಳೆ ಹಿಟ್ನಳ್ಳಿ ನಿವಾಸಿ ಉರಗ ಸ್ನೇಹಿ ಉಮೇಶ, ಮರವೇರಿ ಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟರು.