ವಿಜಯಪುರ: ನಗರದ ಮಹಾತ್ಮ ಗಾಂಧಿ ವೃತ್ತ, ಬಿಎಲ್ಡಿಇ ರಸ್ತೆ ಹಾಗೂ ಕೆಸಿ ಮಾರುಕಟ್ಟೆಗಳಲ್ಲಿ ಬಾಲಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಡೆದಿದೆ.
7 ಬಾಲಕಾರ್ಮಿಕ ಮಕ್ಕಳನ್ನು ಮಕ್ಕಳ ಸಹಾಯವಾಣಿ-1098 ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು. ಇನ್ನು 4 ಮಕ್ಕಳನ್ನು ಮಾಲೀಕರು ಹಾಗೂ ಪಾಲಕರಿಗೆ ತಿಳಿಹೇಳಿ ಮನೆಗೆ ಕಳುಹಿಸಲಾಗಿದೆ. ಅಂಗಡಿಗಳ ಮಾಲೀಕರಿಗೆ ಅನಿಷ್ಠ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ ಯೋಜನಾ ನೀರ್ದೆಶಕಿ ಸುನಂದಾ ತೋಳಬಂದಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.