ವಿಜಯಪುರ: ಅತಿಕ್ರಮಣ ಮಾಡಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆಯಿಂದ ವಿಜಯಪುರದ ಶಾಸ್ತ್ರೀ ನಗರದಲ್ಲಿ ನಡೆಸಿದರು. 29 ಮನೆಗಳನ್ನು ಮೂರು ಜೆಸಿಬಿ ಮೂಲಕ ತೆರವುಗೊಳಿಸಿದರು.
ಇನ್ನು ಕಾರ್ಯಾಚರಣೆ ಮಹಾನಗರ ಪಾಲಿಕೆ ಆಯುಕ್ತ ಮೆಕ್ಕಳಕಿ ನೇತೃತ್ವದಲ್ಲಿ ಮಾಡಿದ್ದು, ಅತಿಕ್ರಮಣ ತೆರವು ಮಾಡುವಂತೆ ಮಹಾನಗರ ಪಾಲಿಕೆಯಿಂದ ನೋಟೀಸ್ ಜಾರಿ ಮಾಡಲಾಗಿತ್ತು. ಇನ್ನು ಸರ್ವೆ ನಂ.672ಕ ದಲ್ಲಿ ಅತಿಕ್ರಮಣವಾಗಿ ಕಟ್ಟಿದ ಮನೆಗಳನ್ನು ತೆರವು ಮಾಡಿದಕ್ಕೆ
ಮನೆ ಕಳೆದುಕೊಂಡವರ ಕಣ್ಣೀರು ಹಾಕಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ನೀಡಲಾಗಿದೆ.