ವಿಜಯಪುರ: ರಾಜ್ಯ ಮಟ್ಟದ ಅಡ್ವೋಕೆಟ್ಸ್ ಕ್ರಿಕೆಟ್ ಟ್ರೋಫಿ ಆಯೋಜನೆ ಮಾಡಲಾಗಿದೆ ಎಂದು ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಸ್ ಎಸ್ ಡೊಂಗರಗಾವಿ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಅಡ್ವೋಕೆಟ್ಸ್ ಬಾರ್ ಅಸೋಸಿಯೇಷನ್ ವತಿಯಿಂದ ಮೇ 12 ರಿಂದ ಮೇ 15ರ ವರೆಗೂ ಟೆನಿಸ್ ಬಾಲ್ ಪಂದ್ಯಾವಳಿ ನಡೆಯಲಿದೆ. ಅಲ್ಲದೇ, ಕ್ರಿಕೆಟ್ ಮ್ಯಾಚ್ 8 ಓವರ್ ನ ಪಂದ್ಯವಾಗಿದೆ ಎಂದರು. ಈ ಪಂದ್ಯಾವಳಿಯೂ ಹೊನಲು ಬೆಳಕಿನ ಪಂದ್ಯ ಆಗಿದೆ. ಅಲ್ಲದೇ, ಮ್ಯಾಚ್ಗಳನ್ನು ಕ್ರಿಕ್ ಹಿರೋಸ್ ಮತ್ತು ಯೂಟ್ಯೂಬ್ ನಲ್ಲಿ ನೋಡಬಹುದು ಎಂದರು.