ವಿಜಯಪುರ: ಭೋವಿ ಅಭಿವೃದ್ಧಿ ನಿಗಮದಲ್ಲಿ ಉದ್ಯಮಶೀಲತಾ ಯೋಜನೆಯಲ್ಲಿ ನಡೆದ ಭಾರಿ ಅವ್ಯವಹಾರ ತನಿಖೆ ಮಾಡಬೇಕು ಎಂದು ಮಧಬಾವಿ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರದ ಐಡಿಬಿಐ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಮದಭಾವಿ ಗ್ರಾಮಸ್ಥರಿಗೆ ಮೂವರು ದಲ್ಲಾಳಿಗಳು ಭಾರಿ ಹಣ ವಂಚನೆಗೈದು ಲಕ್ಷಾಂತರ ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನು ಕಾಂತು ಒಡೆಯರ, ಪರಶುರಾಮ ಹೊಸಪೇಟ, ಪುಂಡಲೀಕ ಮುರಾಳ, ಗುಜೂಲಕರ ಇತರರು ಸೇರಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ನಿಗಮದ ವತಿಯಿಂದ ಸಾಲದ ಹಣವು ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿದ್ದು, ನಂತರ ದಲ್ಲಾಳಿಗಳು ಫಲಾನುಭವಿಗಳ ಕಡೆಯಿಂದ ಒಂದೊಂದು ಚೆಕ್ ಮತ್ತು ಪಾಸಬುಕ್ ಪಡೆದುಕೊಂಡು ಖಾತೆಯಲ್ಲಿದ್ದ 5 ಲಕ್ಷ, 8 ಲಕ್ಷ ಹೀಗೆ ಲಕ್ಷಾಂತರ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಅದಕ್ಕಾಗಿ ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.