ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಬಾಳೆ ತೋಟ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಆಲೂರು ರಸ್ತೆಯಲ್ಲಿ ನಡೆದಿದೆ.
ರೈತ ಈರಪ್ಪ ಮಲ್ಲಪ್ಪ ಕಸಬೇಗೌಡರ ಬಾಳೆ ತೋಟ ಸಂಪೂರ್ಣ ಹಾನಿಯಾಗಿದೆ. ದಿಡ ಎಕರೆ ಜಮೀನಿನಲ್ಲಿ ರೈತ ಈರಪ್ಪ ಕಸಬೇಗೌಡರ ಬೆಳೆದ ಸುಮಾರು 350 ಬಾಳೆ ಕಾಯಿ ಸಮೇತ ನೆಲಕ್ಕೆ ಉರಳಿದೆ. ಇನ್ನೂ 25 ದಿನಗಳಲ್ಲಿ ಬಾಳೆ ಬೆಳೆಗಳು ಕೈಗೆ ಬರುತ್ತಿತ್ತು. ಇದೀಗ ಭಾರೀ ಮಳೆ, ಗಾಳಿಯಿಂದ ನೆಲಕ್ಕೆ ಉರುಳಿ ಸಂಕಷ್ಟ ಎದುರಾಗಿದೆ. ಅದಕ್ಕಾಗಿ ಸರ್ಕಾರದವರು ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.