ವಿಜಯಪುರ: ಪ್ರಸ್ತುತ ರಾಜ್ಯದಲ್ಲಿ ಕೊವಿಡ್ ಸೋಂಕು ಇಳಿಕೆಯಾಗಿರುವುದರಿಂದ ವಿಜಯಪುರ ಕೇಂದ್ರ
ಕಾರಾಗೃಗಹದಲ್ಲಿನ ಬಂದಿಗಳಿಗೆ ದಿನಾಂಕ: 21-03-2022 ರಿಂದ ನೇರ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯಸ್ಥರಾದ ಐ. ಜೆ ಮ್ಯಾಗೇರಿ ಅವರು ತಿಳಿಸಿದ್ದಾರೆ.
ಕೋವಿಡ ಮಾರ್ಗಸೂಚಿಗಳನ್ವಯ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ. ಮುಂಜಾಗ್ರತ
ಕ್ರಮವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಕೊವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಿಗಧಿತ ಸಂದರ್ಶನವನ್ನು ಮಾತ್ರ ನೀಡಲಾಗುವುದು.
ಆದ್ದರಿಂದ ಬಂದಿಗಳ ಸಂದರ್ಶನಕ್ಕೆ ಬರುವ ಕುಟುಂಬ
ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೇ, ಕಾರಾಗೃಹದ ಈ ಕೆಳಕಂಡ ಇ-
ಮೇಲ್ | ವಾಟ್ಸಪ್ | ದೂರವಾಣಿ ಮುಖಾಂತರ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ನೋಂದಾಯಿಸಿ, ನಿಗಧಿಪಡಿಸಿರುವ ದಿನ ಮತ್ತು ಸಮಯಕ್ಕೆ ಸಂದರ್ಶನಕ್ಕೆ ಆಗಮಿಸಬೇಕು.
ಸಂದರ್ಶನಕ್ಕೆ ಬರುವ ಸಂದರ್ಶಕರು ಯಾವುದೇ ರೀತಿಯ ಕೋವಿಡ ರೋಗ ಲಕ್ಷಣಗಳನ್ನು
ಹೊಂದಿರಬಾರದು ಹಾಗೂ ಕಡ್ಡಾಯವಾಗಿ ಎರಡು ಡೋಸ್ ಕೊವಿಡ್ ಲಸಿಕೆಗಳನ್ನು ಹಾಕಿಸಿಕೊಂಡಿರುವ ಕುರಿತು ಲಸಿಕಾ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಸಂದರ್ಶಕರುಗಳು ಕೋವಿಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಹೆಚ್ಹಿನ ಮಾಹಿತಿಗಾಗಿ ಕಾರಾಗೃಹದ ಮುಖ್ಯಸ್ಥ ಡಾ|| ಐ.ಜೆ.ಮ್ಯಾಗೇರಿ. ಕಾರಾಗೃಹದ ಸ್ಥಿರ ದೂರವಾಣಿ ಸಂಖ್ಯೆ: 08352-272044 ಸಿ.ಯು.ಜಿ ಮೊಬೈಲ್ ಸಂಖ್ಯೆ: 9480806490 ಕಾರಾಗೃಹದ ಇ-ಮೇಲ್ ವಿಳಾಸ: Email:[email protected] ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.