ವಿಜಯಪುರ: ಶ್ರೀರಾಮನು ದೇಶದ ಸಂಸ್ಕೃತಿ ಹಾಗೂ ಆತ್ಮ ಆಗಿದ್ದಾರೆ ಎಂದು ದಿಶಾ ಫೌಂಡೇಶನ್ ಅಧ್ಯಕ್ಷೆ ಮಂಚಾಲೇಶ್ವರಿ ತೊನಶ್ಯಾಳ ಹೇಳಿದರು. ಇನ್ನು ರಾಮನವಮಿ ಪ್ರಯುಕ್ತ ದಿಶಾ ಫೌಂಡೇಶನ್ ವತಿಯಿಂದ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವ್ಯವಸ್ಥೆ ಮಾಡಿದರು.
ನಗರದ ಮಾರ್ಕೆಟ್ ನಲ್ಲಿರುವ ರಾಮ ಮಂದಿರದ ಪಕ್ಕದಲ್ಲಿ ದಿಶಾ ಫೌಂಡೇಶನ್ ಅಧ್ಯಕ್ಷೆ ಮಂಚಾಲೇಶ್ವರಿ ತೊನಶ್ಯಾಳ ನೇತೃತ್ವದಲ್ಲಿ ರಾಮ ಮಂದಿರಕ್ಕೆ ಆಗಮಿಸುವ ಭಕ್ತರು ಹಾಗೂ ಸ್ಥಳೀಯರಿಗೆ ಮಜ್ಜಿಗೆ ನೀಡಿದರು. ಬಿಸಿಲಿನ ತಾಪ ಕಡಿಮೆ ಮಾಡಲು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಕೋವಿಡ್ ಉಲ್ಬಣ ಆಗದಂತೆ ಭಕ್ತರು ರಾಮನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಮಂಜುಳಾ ಅಂಗಡಿ, ಕವಿತಾ, ಪ್ರೀತಿ, ಪ್ರೇಮಾ, ಗೀತಾ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.