ವಿಜಯಪುರ: ವಿಜಯಪುರ ನಗರ ಹಾಗೂ ತಾಲೂಕಿನಾದ್ಯಂದ ಜುಲೈ 12 ಸಂಜೆಯಿಂದ ರಿಂದ ಜುಲೈ 13ರ ಬೆಳಗ್ಗೆ ವರೆಗೂ ಉತ್ತಮ ಮಳೆ ಆಗಿದೆ. ವಿಜಯಪುರ ನಗರದಲ್ಲಿ 8.18, ಬಬಲೇಶ್ವರ 7.8, ಸಿಂದಗಿ 9.02, ತಿಕೋಟಾ 6.5, ಇಂಡಿ 16.14, ಚಡಚಣ 15, ಕೊಲ್ಲಾರ 8.6 ಮೀಟರ್ ನಷ್ಟು ಮಳೆ ಆಗಿದೆ. ಅಲ್ಲದೇ, ಜಿಲ್ಲಾದ್ಯಂತ ಸರಾಸರಿ 9.13 ಮಿಲಿ ಮೀಟರ್ ನಷ್ಟು ಮಳೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಅಲ್ಲದೇ, ಕಳೆದ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಮನೆಗಳು ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿಯಲ್ಲಿ ಒಂದು ಕಚ್ಚಾ ಮನೆ, ತಿಕೋಟಾದ ಅರಕೇರಿಯಲ್ಲಿ ಎರಡು ಕಚ್ಚಾ ಮನೆ, ಕೊಲ್ಹಾರದಲ್ಲಿ 3 ಕಚ್ಚಾ ಮನೆಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.