ವಿಜಯಪುರ: ಅಕ್ರಮವಾಗಿ ಕುಷ್ಠಗಿ ಭಾಗದಿಂದ ಕಲಬುರ್ಗಿಯತ್ತ ಲಾರಿಗಳಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಸಂಶಯದ ಮೇಲೆ 45 ಗೋವು(ಆಕಳು) ಲಾರಿ ಸಮೇತ ವಶಪಡಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಕೃಷ್ಣಾ ನದಿಯ ಸೇತುವೆ ದಾಟಿ ತಂಗಡಗಿ ಗ್ರಾಮದ ಮೂಲಕ ಇವುಗಳನ್ನು ಸಾಗಿಸುತ್ತಿರುವ ಮಾಹಿತಿ ಅರಿತ ವಿಶ್ವ ಹಿಂದು ಪರಿಷತ್, ಭಜರಂಗ ದಳ ಸೇರಿದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ವಾಹನ ತಡೆದು ವಿಚಾರಣೆ ನಡೆಸಿದಾಗ ಇವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಮಾಹಿತಿ ಗೊತ್ತಾಗಿದೆ. ಅದಕ್ಕಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಗೋವುಗಳನ್ನು ತಂಗಡಗಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಳಿಸಿ ಹಿಂದು ಪರ ಸಂಘಟನೆಗಳ ಮುಖಂಡರು, ಪೊಲೀಸರು ಅವುಗಳಿಗೆ ಮೇವು, ನೀರು ಕೊಟ್ಟು ಮಾನವೀಯತೆ ತೋರಿದರು. ಸಧ್ಯ ಎಲ್ಲ ಗೋವುಗಳನ್ನು ಯಲಗೂರದಲ್ಲಿರುವ ಗೋಶಾಲೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.
![](https://karnataka1news.com/wp-content/uploads/2023/06/IMG-20230617-WA0090-1024x576.jpg)