ವಿಜಯಪುರ: ಎನ್ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಸ್ಫೋಟಗೊಂಡ ಬೆಂಕಿ ಕಾಣಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಕೂಡಗಿ ಎನ್ಟಿಪಿಸಿಯಲ್ಲಿ ನಡೆದಿದೆ.
ಕಲ್ಲಿದ್ದಲು ಸಾಗಾಣಿಕೆಯ ಯಂತ್ರ ಚಾಲನೆಯಲ್ಲಿ ಇರುವಾಗ ಬೇರಿಂಗ್ ತಿರುಗುತ್ತ ಶಾಖೋತ್ಪನ್ನಗೊಂಡು ರಬ್ಬರ್ ಬೆಲ್ಟ್ ಗೆ ಬೆಂಕಿ ತಾಕಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಕೂಡಲೇ ಸ್ಥಾವರ ವ್ಯಾಪ್ತಿಯ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಕೂಡಗಿ ಎನ್ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.