ವಿಜಯಪುರ: ಸಿಡಿಲು ಬಡಿದು ಮಹಿಳೆ ಹಾಗೂ ಒಂದು ಎಮ್ಮೆ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.
ಜೈನಾಬಿ ನಜೀರಅಹ್ಮದ ಸಿಪಾಯಿ (55) ಸಿಡಿಲು ಬಡಿದು ಮೃತಪಟ್ಟ ಮಹಿಳೆ. ಅಲ್ಲದೇ, ಹೊಲದಲ್ಲಿ ಕಸ ತೆಗೆಯುವ ವೇಳೆ ಮಳೆ ಬಂದಿದೆ. ಅದಕ್ಕಾಗಿ ಮರದ ಕೆಳಗೆ ನಿಂತಿರುವ ವೇಳೆಯಲ್ಲಿ ಮಹಿಳೆಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಪಕ್ಕದಲ್ಲಿದ ಎಮ್ಮೆ ಕೂಡ ಮೃತಪಟ್ಟಿದೆ. ಈ ಘಟನೆ ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.