ವಿಜಯಪುರ: ನವರಾತ್ರಿ ಹಬ್ಬದ ಹಿನ್ನಲೆ ವಿಜಯಪುರ ನಗರದ ಜಲನಗರ ಪೊಲೀಸ ಠಾಣೆಯಲ್ಲಿ ಪೂಜೆ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ವಿಜಯಪುರ ಎಸ್ಪಿ ಎಚ್.ಡಿ. ಆನಂದಕುಮಾರ ನೇತೃತ್ವದಲ್ಲಿ ಬೈಕ್, ವಾಹನಗಳಿಗೆ ಪೂಜೆ ಮಾಡಲಾಯಿತು. ಅಲ್ಲದೇ, ಈ ವೇಳೆಯಲ್ಲಿ ಡಿಎಸ್ಪಿ ಸಿದ್ಧೇಶ್ವರ, ಸಿಪಿಐ, ಪಿಎಸ್ಐ ಸೇರಿದಂತೆ ಪೊಲೀಸ ಸಿಬ್ಬಂದಿಗಳು ಹಿಂದು ಸಂಪ್ರದಾಯದಂತೆ ಕೆಂಪು, ಬಿಳಿ, ಕೇಸರಿ ಬಣ್ಣದ ಡ್ರೇಸ್ನಲ್ಲಿ ಮಿಂಚಿದ್ದರು.