ವಿಜಯಪುರ: ವಿಜಯಪುರ ನಗರ ಹಾಗೂ ತಾಲೂಕಿನಾದ್ಯಂದ ಆಗಷ್ಟ್ 1ರ ಬೆಳಗ್ಗೆಯಿಂದ ಆಗಷ್ಟ್ 2ರ ಬೆಳಗ್ಗೆ ವರೆಗೂ ಉತ್ತಮ ಮಳೆ ಆಗಿದೆ. ವಿಜಯಪುರ ನಗರದಲ್ಲಿ 9.36, ಬಬಲೇಶ್ವರ 6.2, ತಿಕೋಟಾ 14.95, ಸಿಂದಗಿ 3.1, ಇಂಡಿ 38.96, ಚಡಚಣ 21.7, ಮುದ್ದೇಬಿಹಾಳ 12.85, ದೇವರಹಿಪ್ಪರಗಿ 5.6 ಮೀಟರ್ ನಷ್ಟು ಮಳೆ ಆಗಿದೆ. ಅಲ್ಲದೇ, ಜಿಲ್ಲಾದ್ಯಂತ ಸರಾಸರಿ 14.84 ಮಿಲಿ ಮೀಟರ್ ನಷ್ಟು ಮಳೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಅಲ್ಲದೇ, ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ, ಗಾಳಿಗೆ ಹಲವು ಮನೆಗಳು ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಜಿಲ್ಲಾದ್ಯಂತ 6 ಮನೆಗಳು ಹಾನಿಯಾಗಿದೆ.
ಇಂಡಿ ತಾಲ್ಲೂಕಿನ ಬಳ್ಳೊಳ್ಳಿ 3 ಕಚ್ಚಾ ಮನೆ, ಬಬಲೇಶ್ವರ ತಾಲೂಕಿನ 2 ಕಚ್ಚಾ ಮನೆ ಹಾಗೂ ವಿಜಯಪುರದ ಮದಭಾವಿಯಲ್ಲಿ ಒಂದು ಹಾನಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.