K1N ಡೆಸ್ಕ್: ಪುಸ್ತಕಗಳು ಜ್ಞಾನ ಬಂಡಾರ. ಪುಸ್ತಕಗಳು ಜ್ಞಾನದ ಜ್ಯೋತಿ. ಆದ್ರೇ, ಇಲ್ಲೊಬ್ಬ ಮಹಾಶಯ ಇದನ್ನೆ ಬಂಡವಾಳ ಮಾಡಿಕೊಂಡು ಬರೋಬ್ಬರಿ $90,000 ನಗದು ಪುಸ್ತಕದ ಮಧ್ಯದಲ್ಲಿ ಮುಚ್ಚಿಟ್ಟು ಸಾಗಿಸುವ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಂದರ್ ಆಗಿದ್ದಾನೆ. ಇನ್ನೂ ಮುಂಬೈ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಪುಸ್ತಕದ ಪುಟಗಳ ನಡುವೆ ಪ್ರತ್ಯೇಕವಾಗಿ ಬೃಹತ್ ಮೊತ್ತದ ನೋಟುಗಳನ್ನು ಇರಿಸಲಾಗಿತ್ತು. ಬಂಧಿತ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದು ಸಮಗ್ರ ಮಾಹಿತಿ ಕಲೆಹಾಕಲಾಗ್ತಿದೆ. ಒಂದು ದಿನದ ಹಿಂದೆ ಜೈಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಇಬ್ಬರು ಪ್ರಯಾಣಿಕರಿಂದ 55 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.