ವಿಜಯಪುರ: ವಿಜಯಪುರ ನಗರ ಹಾಗೂ ತಾಲೂಕಿನಾದ್ಯಂತ ಆಗಷ್ಟ್ 28ರ ಬೆಳಗ್ಗೆಯಿಂದ ಆಗಷ್ಟ್ 29ರ ಬೆಳಗ್ಗೆ ವರೆಗೂ ಸಾಧಾರಣ ಮಳೆ ಆಗಿದೆ. ಬಸವನಬಾಗೇಬಾಡಿ 0.63, ಮುದ್ದೇಬಿಹಾಳ 19.1, ತಾಳಿಕೋಟೆ 10.6, ಸಿಂದಗಿ 11.47 ದೇವರಹಿಪ್ಪರಗಿ 14.76 ಮೀಟರ್ ನಷ್ಟು ಮಳೆ ಆಗಿದೆ. ಅಲ್ಲದೇ, ಜಿಲ್ಲಾದ್ಯಂತ ಸರಾಸರಿ 5.34 ಮಿಲಿ ಮೀಟರ್ ನಷ್ಟು ಮಳೆ ಆಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಇನ್ನೂ ಭಾರಿ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಜಿಲ್ಲಾದ್ಯಂತ 24 ಮನೆಗಳು ಹಾನಿಯಾಗಿದ್ದು, ಬಸವನಬಾಗೇಬಾಡಿ 15, ಸಿಂದಗಿ 3, ಆಲಮೇಲ 2 ಮುದ್ದೇಬಿಹಾಳ 4 ಕಚ್ಚಾ ಮನೆಗಳು ಹಾನಿಯಾಗಿದೆ. ಅಲ್ಲದೇ, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.