ವಿಜಯಪುರ: ವಿಜಯಪುರ ನಗರವು ಸಮಗ್ರ ಮೂಲಭೂತ ಸೌಲಭ್ಯಗಳನ್ನೋಳಗೊಂಡ ನಗರವಾಗಿ ಬೆಳೆಯಬೇಕಿರುವುದರಿಂದ ನಗರದಲ್ಲಿ ಖಾಸಗಿ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆಯ ಆಯುಕ್ತರು ಹಾಗೂ ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಪರಿಶೀಲನೆ ನಡೆಸಿದರು.
ನಗರದ ಉತ್ತರ ಭಾಗದ ಹಾಗೂ ದಕ್ಷಿಣ ಭಾಗಗಳಲ್ಲಿ ಬರುವ ಬಡಾವಣೆಗಳನ್ನು ಪರಿಶೀಲಿಸಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೋಸ್ಕರ ಅನುಮೋದನೆ ನೀಡಲಾಗುತ್ತಿರುವುದನ್ನು, ನಗರ ವ್ಯಾಪ್ತಿಯಲ್ಲಿನ ಬಡಾವಣೆಗಳ ‘ಅಭಿವೃದ್ಧಿಗೆ ಕಾಯ್ದೆ ಹಾಗೂ ಸರಕಾರದ ಮಾರ್ಗಸೂಚಿಗಳನ್ವಯ ಬಡಾವಣೆಗಳು ನಿಗದಿತ ಸಮಯದಲ್ಲಿ, ನಿಗದಿತ ಗುಣಮಟ್ಟದ ಕಾಮಗಾರಿಗಳನ್ನೊಳಗೊಂಡು ಅಭಿವೃದ್ಧಿಯಾಗುತ್ತಿವೆಯೇ ಎಂಬುವುದನ್ನು ಖುದ್ದು ಪರಿಶೀಲನೆ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಯಾಗುತ್ತಿರುವ ಬಡಾವಣೆಗಳು ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಹಾಗೂ ಟೌನ್ ಪ್ಲಾನಿಂಗ್ ಕಾಯ್ದೆ ಮತ್ತು ರೇರಾ ಕಾಯ್ದೆಗಳಂತೆ ಮೂಲಭೂತ ಸೌಲಭ್ಯಗಳನ್ನು ಹೊಂದಿದ ಬಡಾವಣೆಯಾಗಿ, ಕಾಯ್ದೆ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಾಗಿ ಪರಿಶೀಲನೆಗೊಳಪಡಿಸಿ, ಅನುಷ್ಠಾನಗೊಳಿಸುವುದು, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆಗಳ ಆದ್ಯ ಕರ್ತವ್ಯವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದಿಂದ ರೇರಾ ಕಾಯ್ದೆ -2016 ರಲ್ಲಿ ಕಾಯ್ದೆಯಾಗಿ ಅನುಷ್ಠಾನಕ್ಕೆ ಬಂದಿದ್ದು, ಕರ್ನಾಟಕ ಸರಕಾರವು ದಿನಾಂಕ: 11-07-2017 ದಿಂದ ಅನುಷ್ಠಾನಗೊಳಿಸುತ್ತಿದೆ. ಈ ಕಾಯ್ದೆಯ ಮೂಲ ಉದ್ದೇಶ ಸಾರ್ವಜನಿಕರಿಗೆ ನಿವೇಶನ ಮತ್ತು ಮನೆಗಳನ್ನು ನಿಗದಿತ ಅವಧಿಯಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ನೀಡಬೇಕಾಗಿದ್ದು, ಬಡಾವಣೆ ಅಭಿವೃದ್ಧಿದಾರರ ಆದ್ಯ ಕರ್ತವ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಅದರಂತೆ ಇದನ್ನು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆಗಳು ಕಾಲಕಾಲಕ್ಕೆ ಪರಿಶೀಲಿಸಿ ಗ್ರಾಹಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರಿಶೀಲನೆ ಕೈಗೊಂಡು ಇಲಾಖೆ ಸರಕಾರದ ಗಮನಕ್ಕೆ ತರಬೇಕಿರುತ್ತದೆ. ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿ, ಸಿಬ್ಬಂದಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಬಡಾವಣೆಗಳ ಪರಿಶೀಲನೆ ನಂತರ ಅವರು ಸಭೆಯನ್ನು ನಡೆಸಿದರು.
ಸಭೆಯಲ್ಲಿ ಬಡಾವಣೆ ಅನುಮೋದನೆ ಕಾಯ್ದೆಗಳು ಹಾಗೂ ನಿಗದಿತ ಸಮಯದಲ್ಲಿ ಮೂಲಭೂತ ಸೌಲಭ್ಯಗಳ ಲಭ್ಯತೆಯ ಬಗ್ಗೆ ರೇರಾ ಕಾಯ್ದೆಯಂತೆ ಅನುಷ್ಠಾನವಾಗಬೇಕಿರುವ ಬಗ್ಗೆ ಕಾಯ್ದೆ ಜಾರಿಯಾದ ನಂತರದಿಂದ 2021 ಡಿಸೆಂಬರ್ ಮಾಹೆವರೆಗಿನ ಬಡಾವಣೆಗಳ ಅನುಮೋದನೆ ಆಗಿರುವ, ಅನುಮೋದನೆಯಾಗಿ ಅಭಿವೃದ್ಧಿಗೊಳ್ಳುತ್ತಿರುವ ಮತ್ತು ಅನುಮೋದನೆಯಾಗಿ ಅನುμÁ್ಟನಗೊಳ್ಳಬೇಕಿರುವ ಬಡಾವಣೆಗಳ ವಿವರಗಳನ್ನು ಕ್ರೋಢೀಕರಿಸಿ ವರದಿ ಸಲ್ಲಿಸಲು ಅವರು ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತವಾಗಿ ವಿಜಯಪುರ ನಗರದಲ್ಲಿ ಯೋಜನಾಬದ್ಧವಾಗಿ ವಿವಿಧ ಕಾಯ್ದೆಗಳ ಅಡಿಯಲ್ಲಿ ಅನುಮೋದನೆಯಾಗಿ ಅಭಿವೃದ್ಧಿಗೊಂಡಿರುವ ಅಭಿವೃದ್ಧಿಗೊಳ್ಳುತ್ತಿರುವ ಮತ್ತು ಅಭಿವೃದ್ಧಿಗೊಳ್ಳಬೇಕಾಗಿರುವ ಬಡಾವಣೆಗಳಲ್ಲಿನ ನಿವೇಶನ, ಮನೆಗಳನ್ನು ನಿಗಧಿತ ಸಮಯದಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳುವುದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಆಗಬೇಕೆಂದು ಅವರು ತಿಳಿಸಿದರು.
ಹಾಗೆಯೇ ವಿಜಯಪುರ ನಗರ ಸ್ವಚ್ಚ ಸರ್ವೇ ಕ್ಷಣದಲ್ಲಿ ಇನ್ನೂ ಹೆಚ್ಚಿನ ಅ0ಕಗಳಿಸಲು ಸ್ವಚ್ಛತೆಯ ಕುರಿತು ಪಾಲಿಕೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕ್ರಮವನ್ನು ಫೆಬ್ರುವರಿ ಮಾಹೆಯಿಂದ ಕೈಗೊಳ್ಳಬೇಕೆಂದು ಹಾಗೂ ವಿವಿಧ ಮಾಧ್ಯಮಗಳ ಮುಖಾ0ತರ ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಪಾಲಿಕೆಯ ಅಧಿಕಾರಿ, ಸಿಬ್ಬಂದಿಗಳಿಗೆ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು.
ಸ್ಥಳ ಪರಿಶೀಲನೆ ವೇಳೆ ಹಾಗೂ ಸಭೆಯಲ್ಲಿ ಪಾಲಿಕೆಯ ಆಯುಕ್ತರಾದ ವಿಜಯ ಮೆಕ್ಕಳಕಿ, ಕಾರ್ಯನಿರ್ವಾಹಕ ಅಭಿಯಂತರರಾದ ವಿಠ್ಠಲ ಹೊನ್ನಳ್ಳಿ ಹಾಗೂ ಎಮ್ ಸಿ ಡೊಳ್ಳಿ ಮತ್ತು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ನಗರ ಯೋಜನಾಧಿಕಾರಿಗಳು ಹಾಗೂ ಸಹಾಯಕ ಕಿರಿಯ ಅಭಿಯಂತರರು, ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರುಗಳಾದ ಶ್ರೀ ಎಸ್. ಎಸ್. ಹೇರಲಗಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.