ಆಸ್ಟ್ರೇಲಿಯಾ: ಕಾಂಗರೂ ನಾಡಿನ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ನಿನ್ನೆ ನಿಧನರಾಗಿದ್ದಾರೆ. 52 ವರ್ಷ ಶೇನ್ ವಾರ್ನ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಶೇನ್ ವಾರ್ನ್ ಥಾಯ್ಲೆಂಡ್ನ ತಮ್ಮ ವಿಲ್ಲಾದಲ್ಲಿ ಇದ್ದರು. ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ತಮ್ಮ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ಶೇನ್ ವಾರ್ನ್, 708 ವಿಕೆಟ್ ಪಡೆದಿದ್ದಾರೆ. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಹಲವು ದಾಖಲೆಗಳು ಶೇನ್ ವಾರ್ನ್ ಹೆಸರಿನಲ್ಲಿವೆ. ಇದೀಗ ಶೇನ್ ವಾರ್ನ್ ಹಠಾತ್ ನಿಧನಕ್ಕೆ ಭಾರತ, ಆಸ್ಟ್ರೇಲಿಯಾ ಸೇರಿದಂತೆ ಕ್ರಿಕೆಟ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.