ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಕಣ ರಂಗೇರಿದೆ. ಅದರಲ್ಲೂ ವಾರ್ಡ್ ನಂಬರ 24ರ ಕಣ ಬಿಸಿಲಿನಂತೆ ಉರಿಯುತ್ತಿದೆ.
*ಜಿದ್ದಾಜಿದ್ದಿ ಕಣ..*
ವಾರ್ಡ್ ನಂಬರ 24ರಲ್ಲಿ ಕೈ ವರ್ಸ್ಸ್ ಪಕ್ಷೇತರ ಮಾತ್ರ ಬಿರುಸಿನ ಹೋರಾಟ ಆರಂಭವಾಗಿದೆ. ಕೈ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳು ಹಾಗೂ ಪಕ್ಷೇತರ ಅಭ್ಯರ್ಥಿ ವಿಮಲಾ ರಫೀಕ್ಅಹ್ಮದ್ ಖಾನೆ ಮಧ್ಯೆ ಜಿದ್ದಾಜಿದ್ದಿನ ರಾಜಕೀಯ ಆರಂಭವಾಗಿದೆ. ಇನ್ನು ಈ ವಾರ್ಡ್ ನಲ್ಲಿ ಕಮಲ ಮಾತ್ರ ಸೈಲೆಂಟ್ ರಾಜಕೀಯ ಮಾಡುತ್ತಿದೆ.
*ಖಾನೆ ಸಾಬ್ ಆಫ್ಕೆ ಬಗಲ್ ಮೈ ದುಷ್ಮನ್ ಹೈ…*
ನಾನು ಕೋವಿಡ್ ಸಂದರ್ಭದಲ್ಲಿ ಉಸಿರುಗಾಗಿ ಹೋರಾಟ ಮಾಡಿದ್ದೇನೆ. ಯಾವುದೇ ಹಣ, ಆಮಿಷಕ್ಕಾಗಿ ನಾನು ಆಕ್ಸಿಜನ್ ಮಾರಾಟ ಮಾಡಿಲ್ಲ. ಜನತೆಗಾಗಿ ನನ್ನ ಜೀವನ ತ್ಯಾಗ ಮಾಡಿದ್ದೇನೆ. ಅದಕ್ಕಾಗಿ ಜನತೆಯೇ ನೀವೇ ಚುನಾವಣೆಗೆ ಇಳಿಯಬೇಕು ಎಂದು ಮನವಿ ಮಾಡಿದ್ದಾರೆ. ಅವರ ಆಶೀರ್ವಾದ ನನ್ಮೇಲೆ ಇದೆ ಎಂದರು.
ಒಟ್ಟಿನಲ್ಲಿ ಕೈ ಹಾಗೂ ಖಾನೆ ಮಧ್ಯೆ ಹೋರಾಟದ ಫಲಿತಾಂಶ ಬಳಿಕೆ ತಿಳಿದು ಬರುತ್ತದೆ…