ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಸಬ್ ರೆಜಿಸ್ಟರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿದರು.
ಸಬ್ ರೆಜಿಸ್ಟರ್ ಕಚೇರಿಯಿಂದ ಹಲವು ದೂರುಗಳು ಬಂದಿರುವ ಹಿನ್ನಲೆ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಹಾಗೂ ಅಧಿಕಾರಿಗಳು ಕಚೇರಿಯ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಅಲ್ಲದೇ, ಕಳೆದ ಹಲವು ದಿನಗಳಿಂದ ಸಬ್ ರೆಜಿಸ್ಟರ್ ಕಚೇರಿಯ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು. ಅದಕ್ಕಾಗಿ ಲೆಕ್ಕಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ, ಸಬ್ ರೆಜಿಸ್ಟರ್ ಮಹಮ್ಮದ್ ರಫಿ ಪಟೇಲ್ ಹಾಗೂ ಇತರರಿಂದ ಹಲವು ವಿಚಾರಿಸಿದರು.