ವಿಜಯಪುರ: ಬಿಸಿಲೂರಿನಲ್ಲಿ ಮಹಾನಗರ ಪಾಲಿಕೆ ಚುನಾವಣೆ ಕಾವು ಏರುತ್ತಿದೆ. ಶಿಸ್ತಿನ ಪಕ್ಷ ಎಂದೇ ಹೆಸರುವಾಸಿಯಾಗಿರುವ ಕಮಲ ಪಕ್ಷದಲ್ಲಿ ಮಹಾ ಎಡವಟ್ಟು ಆಗಿದೆ.
ವಿಜಯಪುರದ ವಾರ್ಡ್ ನಂಬರ 12ರ ಬಿಜೆಪಿ ಅಭ್ಯರ್ಥಿಯಾಗಿರುವ ಹೆಸರಿನಲ್ಲೂ ಎಡವಟ್ಟು ಆಗಿದೆ. ಅಲ್ಲದೇ, ಮತದಾನದ ಅಕ್ಟೋಬರ್ 23ಕ್ಕೆ ಮಾಡುವಂತೆ ಮನವಿ ಮಾಡಿರುವ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೌದು..! ವಾರ್ಡ್ ನಂಬರ 12ರ ಅಭ್ಯರ್ಥಿಯಾಗಿರುವ ಮಂಗಳ ಕೋರಿ ಎಂದು ಬಿಜೆಪಿ ಲಿಸ್ಟ್ ನಲ್ಲಿ ಹೇಳಲಾಗಿದೆ. ಆದ್ರೇ, ಬಿಜೆಪಿ ಪ್ರಚಾರದ ಹೆಸರಿನಲ್ಲಿ ರಶ್ಮಿ ಕೋರಿ ಎಂದು ನಮೂದಿಸಲಾಗಿದೆ. ಇನ್ನೂ ಇದಕ್ಕಿಂತ ಮತ್ತೊಂದು ಮಹಾ ಎಡವಟ್ಟಾಗಿದ್ದು, ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಅಕ್ಟೋಬರ್ 23ರ ರವಿವಾರ ನಡೆಯಲಿದೆ. ಅದಕ್ಕಾಗಿ ಮತದಾರರು ಮತದಾನ ಮಾಡುವಂತೆ ಪ್ರಚಾರದ ಪೇಪರ್ನಲ್ಲಿ ನಮೂದಿಸಿದ ಫೋಟೊ ವೈರಲ್ ಆಗುತ್ತಿದೆ.