ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚುರುಕಿನಿಂದ ನಡೆಯುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಕುಟುಂಬ ಸಮೇತರಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಮತ ಚಲಾಯಿಸಿದರು.
ನಗರದ ಅಶ್ರಮ ರಸ್ತೆಯಲ್ಲಿರುವ ವಾರ್ಡ್ ನಂಬರ್ 11 ರ ಮತಗಟ್ಟೆ ಸಂಖ್ಯೆ 95 ರಲ್ಲಿ ಮತದಾನ ಮಾಡಿ, ತದನಂತರ ಮಾತನಾಡಿದ ಅವರು, ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಸಿಗುತ್ತದೆ. ಈ ಸಲ್ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೇ, ಮತದಾರರಲ್ಲಿ ಗೊಂದಲ ಬೇಡ. ಒಬ್ಬರದ ಮತದಾನ ಎರಡು ಮೂರು ಕಡೆಗೆ ಇದೆ. ಇದನ್ನು ಒಂದು ಕಡೆಗೆ ಮಾಡಲಾಗಿದೆ. ಕೆಲವು ಲೋಪದೋಷಗಳು ಆಗಿವೆ. ಅದನ್ನು ತಹಶೀಲ್ದಾರ, ಜಿಲ್ಲಾಡಳಿತ ಪರಿಶೀಲನೆ ಮಾಡುತ್ತದೆ ಎಂದರು.