ವಿಜಯಪುರ: ವಿಜಯಪುರ: ಕಾಂಗ್ರೆಸ್ ಪಕ್ಷದಲ್ಲಿ ಯೂಥ್ ಸಂಘಟನೆಯಲ್ಲಿ ಕೈ ಜೋಡಿಸಿರುವ ಹಿನ್ನಲೆ ಯೂಥ್ ಪ್ರಧಾನ ಕಾರ್ಯದರ್ಶಿಯಾಗಿ ಮೋಹಿನ್ ಅಹಮ್ಮದ್ ಶೇಖ್ ಅವರನ್ನು ಆಯ್ಕೆ ಮಾಡಿ ಆದೇಶ ಮಾಡಲಾಗಿದೆ. ಐವೈಸಿ ಇನ್ ಚಾರ್ಜ್ ಕೃಷ್ಣಾ ಅಲ್ಲಾವರು ಹಾಗೂ ಐವೈಸಿ ಅಧ್ಯಕ್ಷ ಶ್ರೀನಿವಾಸ ಬಿವಿ ಆದೇಶದ ಮೇರೆಗೆ ಶೇಖ್ ಅವರನ್ನು ಕಾಂಗ್ರೆಸ್ನ ಯೂಥ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಬರುವ ಚುನಾವಣೆಯಲ್ಲಿ ಯೂಥ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ಶೇಖ್ ಅವರು ಅತ್ಯುತ್ತಮವಾಗಿ ಕಾಂಗ್ರೆಸ್ ಸಂಘಟನೆ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಉತ್ತಮ ಸೇವೆ ಮಾಡಲಿದ್ದಾರೆ ಎಂದು ಶೇಖ್ ಅವರು ತಿಳಿಸಿದ್ದಾರೆ.