Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಗಣೇಶ ವಿಸರ್ಜನೆ ಅವಘಡ ಕುಟುಂಬಸ್ಥರ ಮನೆಗೆ ಶಾಸಕ ಯತ್ನಾಳ ಭೇಟಿ

ಮೃತಪಟ್ಟ ಯುವಕನ ಸಹೋದರಿಗೆ ಸಿದ್ದಸಿರಿ ಸೌಹಾರ್ದದಲ್ಲಿ ನೌಕರಿ, ಗಾಯಾಳುವಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ

ವಿಜಯಪುರ: ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಈಚೆಗೆ ವಿದ್ಯುತ್ ಸ್ಪರ್ಶದಿಂದ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಡೋಬಳೆ ಗಲ್ಲಿಯ ಯುವಕ ಶುಭಂ ಸಂಕಪಾಲ ಅವರ ಮನೆಗೆ ಹಾಗೂ ಗಾಯಗೊಂಡ ಯುವಕರ ಮನೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಯತ್ನಾಳ, ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಸ್ಪರ್ಶದಿಂದ ದುರ್ಘಟನೆ ನಡೆದಿರುವುದು ಅತ್ಯಂತ ನೋವಿನ ವಿಷಯ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಮನೆಗೆ ಆಧಾರವಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಸಂಕಷ್ಟದಲ್ಲಿದೆ. ಹೀಗಾಗಿ ಮೃತ ಯುವಕನ ಸಹೋದರಿ ಮೋನಿಕಾ ಸಂಕಪಾಲ ಬಿಕಾಂ‌ ಪದವಿದರೆ ಆಗಿದ್ದು, ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕಿರಿಯ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಂಡು, ಅವರ ಕುಟುಂಬದ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಗಾಯಗೊಂಡ ಪ್ರಭು ಬ್ಯಾಳಿ, ಲಕನ್ ಚವ್ಹಾಣ ಅವರಿಗೆ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಕುಟುಂಬದವರಿಗೆ ತಿಳಿಸಿ, ಆಂಬ್ಯುಲನ್ಸ್ ಮೂಲಕ ಆಸ್ಪತ್ರೆ ಕರೆದೊಯ್ಯಲು ಜೆ.ಎಸ್.ಎಸ್ ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ಕಿರಣ ಪಾಟೀಲ, ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ವಿಜಯಕುಮಾರ್ ಚವ್ಹಾಣ, ಮುಖಂಡರಾದ ಶಂಕರ ಹೂಗಾರ, ಚಂದ್ರು ಚೌದರಿ, ದತ್ತಾ ಗೋಲಂಡೆ ಅಲ್ಲದೆ ಅದೇ ಮರಾಠಾ ಸಮಾಜದ ಮುಖಂಡರು, ಯುವಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Author
Karnataka 1 News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

karnataka1news.com

Domain Age: 4 years, 10 months
ಸಂಪೂರ್ಣವಾಗಿ ಸಿದ್ಧವಾಗಿರುವ ಈ ಪ್ರತಿಷ್ಠಿತ ಡಿಜಿಟಲ್ ನ್ಯೂಸ್ ಪೋರ್ಟಲ್ ತಕ್ಷಣದ ಹಸ್ತಾಂತರಕ್ಕೆ ಲಭ್ಯವಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಅಥವಾ ಡಿಜಿಟಲ್ ಉದ್ಯಮಿಗಳಿಗೆ ಇದು ಸುವರ್ಣಾವಕಾಶ. ಉತ್ತಮ ಬೆಲೆ ಹಾಗೂ ತ್ವರಿತ ವರ್ಗಾವಣೆಗೆ ಈಗಲೇ ಸಂಪರ್ಕಿಸಿ.
This fully configured, turnkey digital news portal is available for immediate acquisition. High SEO value and ready to publish from Day 1 - ideal for media houses, journalists, and entrepreneurs. Serious inquiries only. Contact now for quick deal.
Contact / Contact Us
LATEST
*ರಾಷ್ಟ್ರ ಧ್ವಜಕ್ಕೆ ಅಪಮಾನ*ಮಕ್ಕಳ ಜೀವನದ ಜೊತೆ ಚೆಲ್ಲಾಟ, ಡಿಡಿಪಿಐನಿಂದ ದಿನಕ್ಕೊಂದು ಆದೇಶ, ಶಿಕ್ಷಣ ಇಲಾಖೆಯಲ್ಲೇನಿದು ಹುಚ್ಚಾಟ?ಯುವಕರು ದೇಶದ ಶಕ್ತಿ,,, ಸುನಿಲಗೌಡ ಪಾಟೀಲಬ್ಯಾಂಕ್ ಗ್ರಾಹಕರೊಂದಿಗೆ ಸಹಾನುಭೂತಿಯಿಂದ ವರ್ತಿಸಿ::ಟ್ರಾಫಿಕ್ ಪೋಲಿಸರೇ ಏನಿದು ನಿಮ್ಮ ಕೆಲಸ ???*ಆರೋಗ್ಯಯುತ ಜೀವನಕ್ಕಾಗಿ ಯೋಗ ದೈನಂದಿನ ಭಾಗವಾಗಿಸಿಕೊಳ್ಳಿ* -ಜಿಲ್ಲಾಧಿಕಾರಿ ಡಾ. ಆನಂದ್ ಕೆ.ಪೊಲೀಸ್ ಅಧಿಕಾರಿ ವಿರುದ್ಧವೇ ಪೊಲೀಸ್‌ರಿಂದ ದೂರು..?ಅಕ್ರಮದ ಮೂಲಕ ಅಧಿಕಾರ ಹಿಡಿಯಲು ಹಾಲಿ ಅಧ್ಯಕ್ಷರ ಪ್ರಯತ್ನ*ಕನ್ನೂರ ಶಾಂತಿಕುಟೀರ ಆಶ್ರಮದಲ್ಲಿ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರ*: ಏಪ್ರಿಲ್ 10 ರಿಂದ ಮೇ 10 ರ ವರೆಗೆ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ.ವಿಜಯಪುರ ಐತಿಹಾಸಿಕ ಕೆರೆಯಲ್ಲಿ ಮೂವರ ಸಾವು