Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಸರ್ಕಾರದ ಅಹಂಕಾರಕ್ಕೆ ಕಪಾಳಮೋಕ್ಷ ಎಂದ HDK

ನವದೆಹಲಿ-ವಿಧಾನ ಪರಿಷತ್ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತ, ರೈತ ವಿರೋಧಿ ಧೋರಣೆ ಹಾಗೂ ಭ್ರಷ್ಟ ನೀತಿಗಳಿಗೆ ಮತದಾರರು ನೀಡಿರುವ ನೇರ ಕಪಾಳಮೋಕ್ಷ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಎನ್‌ಡಿಎ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳ ಜಯವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹೋರಾಟಕ್ಕೆ ನಾಡಿನ ಜನತೆಯ ಆಶೀರ್ವಾದವಿದೆ ಎಂಬುದಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ಅವರು ಬಣ್ಣಿಸಿದರು.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ಶಶೀಲ್ ನಮೋಶಿ, ಎಸ್.ವಿ.ಸಂಕನೂರು, ಕೆ.ಎಂ.ಸುರೇಶ್ ಹಾಗೂ ಎ.ಪಿ.ರಂಗನಾಥ್ ಗೆಲುವು ಸಾಧಿಸಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ಜೆಡಿಎಸ್ ಮುಖಂಡರು, ಕಾರ್ಯಕರ್ತರ ಅತ್ಯುತ್ತಮ ಸಮನ್ವಯತೆಯಿಂದ ಇಂಥ ಗೆಲುವು ಸಾಧ್ಯವಾಗಿದೆ. 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಾರ್ವಜನಿಕವಾಗಿ ಬೀಗುತ್ತಿದ್ದ ಮುಖ್ಯಮಂತ್ರಿಗಳು ಮತ್ತು ಸಚಿವರ ಅಹಂಕಾರವನ್ನು ಪ್ರಜ್ಞಾವಂತ ಮತದಾರರು ಮಣ್ಣುಪಾಲು ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ದಿನನಿತ್ಯ ಕೇವಲ ಬಾಯಿಮಾತಿನ ಭರವಸೆಗಳು ಮತ್ತು ಘೋಷಣೆಗಳಿಗೆ ಸೀಮಿತವಾಗಿರುವ ಈ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಬಿಡದಿಯ ರೈತ ವಿರೋಧಿ ಭೂಸ್ವಾಧೀನ ನೀತಿ, ನೈಸ್ (BMIC) ಯೋಜನೆಯ ಅಕ್ರಮಗಳು, ಕೆಪಿಎಸ್‌ಸಿ (KPSC) ಪರೀಕ್ಷಾ ಹಗರಣಗಳು ಮತ್ತು ಯುವಜನತೆಗೆ ಮಾಡಿದ ಮೋಸ ಹಾಗೂ ಸ್ವತಃ ಮುಖ್ಯಮಂತ್ರಿಗಳೇ ಹುಟ್ಟುಹಾಕಿದ ಸ್ಟಿಂಗ್ ಆಪರೇಷನ್ ಪ್ರಕರಣಗಳ ವಿರುದ್ಧ ಮತದಾರರು ತಮ್ಮ ಆಕ್ರೋಶವನ್ನು ಮತಗಳ ರೂಪದಲ್ಲಿ ಹೊರಹಾಕಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕೊಡುಗೆ

ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕೊಡುಗೆ ಸ್ಮರಿಸಿದ ಕೇಂದ್ರ ಸಚಿವರು:

ಗೆಲುವು ಸಾಧಿಸಿದ ನಾಲ್ಕೂ ಮೈತ್ರಿ ಅಭ್ಯರ್ಥಿಗಳಿಗೆ ಹಾಗೂ ಹಗಲಿರುಳು ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರು, ಶಾಸಕರು ಮತ್ತು ಮುಖಂಡರಿಗೆ ಅಭಿನಂದನೆ ಸಲ್ಲಿಸಿದ ಸಚಿವರು; ಉಭಯ ಪಕ್ಷಗಳ ನಡುವೆ ಗಟ್ಟಿಯಾದ ಸಮನ್ವಯತೆ ಮೂಡಿಸಲು ಪ್ರತಿದಿನ ತಮ್ಮೊಂದಿಗೆ ಸಂಪರ್ಕದಲ್ಲಿದ್ದು ದೊಡ್ಡ ಜವಾಬ್ದಾರಿ ನಿಭಾಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಶ್ರಮವನ್ನು ವಿಶೇಷವಾಗಿ ಶ್ಲಾಘಿಸಿದರು.

ದೇಶದ ಸಮಗ್ರ ಪ್ರಗತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ತರ ಕೊಡುಗೆ ಮತ್ತು ಅವರ ಜನಪ್ರಿಯ ವರ್ಚಸ್ಸು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರ ಸುದೀರ್ಘ ಪರಿಶ್ರಮ ಮತ್ತು ಜನರಲ್ಲಿದ್ದ ಅವರ ಮೇಲಿನ ಒಲವು ಈ ಗೆಲುವಿಗೆ ಪ್ರಮುಖ ಅಡಿಪಾಯವಾಗಿದೆ. 2028ರಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಅಭಿವೃದ್ಧಿಪರ ಆಡಳಿತ ಮರಳಿ ತರಬೇಕೆಂಬ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿದ್ದಾರೆ ಎಂದು ಅವರು ತಿಳಿಸಿದರು.

Author
Karnataka 1 News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

karnataka1news.com

Domain Age: 4 years, 10 months
ಸಂಪೂರ್ಣವಾಗಿ ಸಿದ್ಧವಾಗಿರುವ ಈ ಪ್ರತಿಷ್ಠಿತ ಡಿಜಿಟಲ್ ನ್ಯೂಸ್ ಪೋರ್ಟಲ್ ತಕ್ಷಣದ ಹಸ್ತಾಂತರಕ್ಕೆ ಲಭ್ಯವಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಅಥವಾ ಡಿಜಿಟಲ್ ಉದ್ಯಮಿಗಳಿಗೆ ಇದು ಸುವರ್ಣಾವಕಾಶ. ಉತ್ತಮ ಬೆಲೆ ಹಾಗೂ ತ್ವರಿತ ವರ್ಗಾವಣೆಗೆ ಈಗಲೇ ಸಂಪರ್ಕಿಸಿ.
This fully configured, turnkey digital news portal is available for immediate acquisition. High SEO value and ready to publish from Day 1 - ideal for media houses, journalists, and entrepreneurs. Serious inquiries only. Contact now for quick deal.
Contact / Contact Us
LATEST
ಶುಗರ್ ಫ್ಯಾಕ್ಟರಿಗಳಿಗೆ ಮುತ್ತಿಗೆ: ಬೆಂಗಳೂರಿಗೆ ಕೇಂದ್ರ ಸಮಿತಿ; ಬೆಳಗಾವಿಗೆ ಬರುವಂತೆ ಕಬ್ಬು ಬೆಳೆಗಾರರು ಪಟ್ಟುಗ್ರಾಮೀಣಾಭಿವೃದ್ಧಿಗೆ ಮೋದಿ ಸರ್ಕಾರದಿಂದ ಹೊಸ ಹೆಜ್ಜೆ: 7,395 ಕೋಟಿ ರೂ. ವೆಚ್ಚದ ‘ಪ್ರಧಾನ ಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆ’ಗೆ ಸಂಪುಟ ಅನುಮೋದನೆದೆಹಲಿ ಎಸ್‌ಐಆರ್‌: ಮತದಾರರ ಹೆಸರು ಕೈಬಿಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪವೈಷ್ಣವಿ, ರಾವಲ್, ಶಫಾಲಿ ಮಿಂಚು: ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್ ಗಳ ಜಯ: ಏಕದಿನ ಸರಣಿ ಕ್ಲೀನ್ ಸ್ವೀಪ್ಸ್ಪೇನ್ ನಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ: ಭೀಕರ ಅಪಘಾತದಲ್ಲಿ 46 ಜನ ದುರ್ಮರಣ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಕೇಂದ್ರ ನೌಕರರಿಗೆ ದೀಪಾವಳಿ ಬಂಪರ್‌ ಗಿಫ್ಟ್‌: DA ಶೇ. 3 ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ ಜೆಡಿಎಸ್ ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದೇಶ‘ನನ್ನ ಕನಸು ನನಸಾದ ಕ್ಷಣ ಇದು!’: ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಜೊತೆ ಕುಣಿದು ಕುಪ್ಪಳಿಸಿದ ಶಾರ್ವರಿಡಿಪಿಎಲ್‌ನಲ್ಲಿ ಸದ್ದು ಮಾಡಿದ್ದ ದೆಹಲಿ ಲೆಗ್ ಸ್ಪಿನ್ನರ್‌ಗೆ ಒಲಿದ ಅದೃಷ್ಟ: ಆರ್‌ಸಿಬಿ, ಮುಂಬೈ ಕಣ್ಣು ಮೇಧಾವಿ ಬಿಧೂರಿ ಮೇಲಿದೆಯೇ?ಫೋನ್’ಪೇಯಿಂದ ‘ತತ್ಕಾಲ್ NPS’ ಸೇವೆ ಆರಂಭ ; ಕೇವಲ ₹250 ಹೂಡಿಕೆಯಲ್ಲಿ ಹೀಗೆ ಪಿಂಚಣಿ ಖಾತೆ ತೆರೆಯಿರಿ