Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ದೆಹಲಿ ಎಸ್‌ಐಆರ್‌: ಮತದಾರರ ಹೆಸರು ಕೈಬಿಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ

ನವದೆಹಲಿ- ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಸಮರ್ಪಕವಾಗಿ ವಿವೇಚನೆ ಬಳಸಿದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 30ರಂದು ನಿಗದಿಯಾಗಿದ್ದ ಗಡುವನ್ನು ವಿಸ್ತರಿಸುವುದಾಗಿ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಭರವಸೆ ನೀಡಿದೆ.

ಮತದಾರರ ವಿಳಾಸ ಬದಲಾವಣೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಈಗಾಗಲೇ 2026ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದು, ನಂತರ ವಿಳಾಸ ಬದಲಾಯಿಸಿದವರನ್ನು ಹೊಸ ಮತದಾರರ ನೋಂದಣಿಗಾಗಿ ಫಾರ್ಮ್-6 ಸಲ್ಲಿಸುವಂತೆ ಕೇಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಇಂತಹವರು ವಿಳಾಸ ಬದಲಾವಣೆಗೆ ಸಂಬಂಧಿಸಿದ ಫಾರ್ಮ್-8 ಸಲ್ಲಿಸಲು ಅವಕಾಶ ನೀಡಬೇಕು ಎಂದು ಸೂಚಿಸಿತು.

ಗಣತಿ ನಮೂನೆಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸದ ಕಾರಣಕ್ಕೆ ಮತದಾನದ ಹಕ್ಕನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕೇ ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದರು. ತಾತ್ಕಾಲಿಕವಾಗಿ ಮನೆಗಳಿಂದ ದೂರವಿದ್ದವರು, ವಲಸೆ ಕಾರ್ಮಿಕರು ಹಾಗೂ ವಿಳಾಸ ಬದಲಾಯಿಸಿದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಮಾಹಿತಿ ಪ್ರಕಾರ, 47,56,732 ಮತದಾರರು ಗಣತಿ ನಮೂನೆಗಳನ್ನು ಹಿಂದಿರುಗಿಸದ ಕಾರಣ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇವರಲ್ಲಿ ಸುಮಾರು 2.12 ಲಕ್ಷ ಮಂದಿಯನ್ನು ಮೃತರು ಎಂದು ಹಾಗೂ ಸುಮಾರು 43 ಲಕ್ಷ ಮಂದಿಯನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಈ ಪೈಕಿ ಅನೇಕರು ಇನ್ನೂ ದೆಹಲಿಯಲ್ಲೇ ವಾಸಿಸುತ್ತಿರಬಹುದು ಎಂದು ಅವರು ವಾದಿಸಿದರು.

ಮತದಾರರ ಹೆಸರುಗಳ ಪರೀಶಿಲನೆ

ಕರಡು ಪಟ್ಟಿಯಿಂದ ಹೊರಗುಳಿದ ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸಲು ಅನುಕೂಲವಾಗುವಂತೆ, ಅವರ ಹಿಂದಿನ ವಿಳಾಸಗಳ ವಿವರಗಳೊಂದಿಗೆ ಪಟ್ಟಿಯನ್ನು ಸ್ಥಳೀಯ ಚುನಾವಣಾ ಕಚೇರಿ ಮತ್ತು ಮತಗಟ್ಟೆಗಳಲ್ಲಿ ಪ್ರಕಟಿಸುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಾಗ ಸೂಕ್ತ ಪರಿಶೀಲನೆ ನಡೆಸಬೇಕು ಹಾಗೂ ನಮೂನೆ ಸಲ್ಲಿಸಲು ವಿಫಲರಾದವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಲು ಅವಕಾಶ ಕಲ್ಪಿಸಬೇಕು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದೆ. ಈ ಬೆಳವಣಿಗೆಯಿಂದ ದೆಹಲಿಯ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹಕ್ಕುಗಳ ರಕ್ಷಣೆಯ ಪ್ರಶ್ನೆ ಮಹತ್ವ ಪಡೆದುಕೊಂಡಿದೆ.

Author
Karnataka 1 News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

karnataka1news.com

Domain Age: 4 years, 10 months
ಸಂಪೂರ್ಣವಾಗಿ ಸಿದ್ಧವಾಗಿರುವ ಈ ಪ್ರತಿಷ್ಠಿತ ಡಿಜಿಟಲ್ ನ್ಯೂಸ್ ಪೋರ್ಟಲ್ ತಕ್ಷಣದ ಹಸ್ತಾಂತರಕ್ಕೆ ಲಭ್ಯವಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಅಥವಾ ಡಿಜಿಟಲ್ ಉದ್ಯಮಿಗಳಿಗೆ ಇದು ಸುವರ್ಣಾವಕಾಶ. ಉತ್ತಮ ಬೆಲೆ ಹಾಗೂ ತ್ವರಿತ ವರ್ಗಾವಣೆಗೆ ಈಗಲೇ ಸಂಪರ್ಕಿಸಿ.
This fully configured, turnkey digital news portal is available for immediate acquisition. High SEO value and ready to publish from Day 1 - ideal for media houses, journalists, and entrepreneurs. Serious inquiries only. Contact now for quick deal.
Contact / Contact Us
LATEST
ದೆಹಲಿಯಲ್ಲಿ ಆಘಾತಕಾರಿ ಘಟನೆ: ಹೆಚ್ಚುವರಿ ಪಲ್ಯ ಕೇಳಿದ್ದಕ್ಕೆ ಚಾಲಕನಿಗೆ ಇರಿದು ಕೊಲೆ: ಆರೋಪಿ ಆಹಾರ ಮಾರಾಟಗಾರ ಅರೆಸ್ಟ್ಶುಗರ್ ಫ್ಯಾಕ್ಟರಿಗಳಿಗೆ ಮುತ್ತಿಗೆ: ಬೆಂಗಳೂರಿಗೆ ಕೇಂದ್ರ ಸಮಿತಿ; ಬೆಳಗಾವಿಗೆ ಬರುವಂತೆ ಕಬ್ಬು ಬೆಳೆಗಾರರು ಪಟ್ಟುಗ್ರಾಮೀಣಾಭಿವೃದ್ಧಿಗೆ ಮೋದಿ ಸರ್ಕಾರದಿಂದ ಹೊಸ ಹೆಜ್ಜೆ: 7,395 ಕೋಟಿ ರೂ. ವೆಚ್ಚದ ‘ಪ್ರಧಾನ ಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆ’ಗೆ ಸಂಪುಟ ಅನುಮೋದನೆದೆಹಲಿ ಎಸ್‌ಐಆರ್‌: ಮತದಾರರ ಹೆಸರು ಕೈಬಿಡುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪವೈಷ್ಣವಿ, ರಾವಲ್, ಶಫಾಲಿ ಮಿಂಚು: ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್ ಗಳ ಜಯ: ಏಕದಿನ ಸರಣಿ ಕ್ಲೀನ್ ಸ್ವೀಪ್ಸ್ಪೇನ್ ನಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ: ಭೀಕರ ಅಪಘಾತದಲ್ಲಿ 46 ಜನ ದುರ್ಮರಣ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಕೇಂದ್ರ ನೌಕರರಿಗೆ ದೀಪಾವಳಿ ಬಂಪರ್‌ ಗಿಫ್ಟ್‌: DA ಶೇ. 3 ಹೆಚ್ಚಳಕ್ಕೆ ಮೋದಿ ಸಂಪುಟ ಅನುಮೋದನೆಸರ್ಚ್ ನೆಪದಲ್ಲಿ ದೌರ್ಜನ್ಯ ಎಸಗುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ ಜೆಡಿಎಸ್ ಕಾರ್ಯಕರ್ತರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂದೇಶ‘ನನ್ನ ಕನಸು ನನಸಾದ ಕ್ಷಣ ಇದು!’: ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಜೊತೆ ಕುಣಿದು ಕುಪ್ಪಳಿಸಿದ ಶಾರ್ವರಿಡಿಪಿಎಲ್‌ನಲ್ಲಿ ಸದ್ದು ಮಾಡಿದ್ದ ದೆಹಲಿ ಲೆಗ್ ಸ್ಪಿನ್ನರ್‌ಗೆ ಒಲಿದ ಅದೃಷ್ಟ: ಆರ್‌ಸಿಬಿ, ಮುಂಬೈ ಕಣ್ಣು ಮೇಧಾವಿ ಬಿಧೂರಿ ಮೇಲಿದೆಯೇ?