ವಿಜಯಪುರ: ಮನೆ, ತೋಟದ ಮನೆ, ದೇವಸ್ಥಾನ ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿನ ಆರೋಪಿಗಳನನ್ನು ಬಂಧಿಸಿ, ಅವರಿಂದ ಬಂಗಾರ, ಬೆಳ್ಳಿ, ನಗದು ಹಣ, ಕಾರ್ ಹಾಗೂ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸನ್ 2025-26 ನೇ ಸಾಲಿನಲ್ಲಿ ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟಿ, ಬಸವನ ಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾದ ತೋಟದ ಮನೆ, ದೇವಸ್ಥಾನದ ಬಾಗಿಲು, ಮನೆಗಳ ಬಾಗಿಲು ಮುರಿದು ಬಂಗಾರ, ಬೆಳ್ಳಿ ಆಭರಣಗಳು ಹಾಗೂ ನಗದು ಕಳ್ಳತನ, ಬಂಗಾರದ ತಾಳಿಸರ ಸುಲಿಗೆ ಪ್ರಕರಣ, ಮೋಸ ಮಾಡಿ ಕಳ್ಳವು ಪ್ರಕರಣ, ಮೋಟಾರ್ ಬೈಕ್ ಹಾಗೂ ರೈತರ ಜಮೀನಿನಲ್ಲಿರುವ ಬೋರವೆಲ್ ಪಂಪಸೆಟ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸದರಿ ತನಿಖಾ ತಂಡಗಳು ಒಟ್ಟು 22 ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ತ್ವರಿತವಾಗಿ 36 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 1,27,38,800/- ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, 02 ಕಾರ್ಗಳು, 17 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.