ವಿಜಯಪುರ: ಜಿಲ್ಲೆಯಲ್ಲಿ ಯಾವುದೇ ಟೊಮ್ಯಾಟೊ ಜ್ವರ ಕಂಡು ಬಂದಿಲ್ಲ ಎಂದು ಜಿಲ್ಲಾ ಸರ್ಜನ್ ಸಂಗಣ್ಣ ಲಕ್ಕಣ್ಣವರ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಇದೊಂದು ವೈರಲ್ ಜ್ವರ ಆಗಿದೆ. ಮಕ್ಕಳಲ್ಲಿ ಈ ಜ್ವರ ಕಂಡು ಬರುತ್ತದೆ. ತಲೆ, ಕೈ ನೋವು ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿ ಟೊಮ್ಯಾಟೊ ತರಹ ಬಬಲ್ಸ್ ಗಳು ಆಗುತ್ತವೆ. ಅದಕ್ಕಾಗಿ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಸಕಲ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.