ವಿಜಯಪುರ: ದೊಡ್ಡ ಮೋರಿಯಲ್ಲಿ ಸಿಲುಕಿಕೊಂಡಿದ್ದ ಹೋರಿಯ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಮೋರಿಯಲ್ಲಿ ಸಿಲುಕಿಕೊಂಡು ಅಲುಗಾಡದ ಸ್ಥಿತಿಯಲ್ಲಿದ್ದ ಹೋರಿಯನ್ನು ವಿಜಯಪುರ ನಗರದ ಎಸ್.ಆರ್.ಕಾಲೋನಿಯಲ್ಲಿ ಹೊರಗಡೆಗೆ ತೆಗೆಯಲಾಗಿದೆ. ಸ್ಥಳೀಯರು, ಗೋರಕ್ಷಣಾ ಯುವಕರು, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಜಾನುವಾರು ರಕ್ಷಣಾದವರು ಒಂದು ಗಂಟೆಗೂ ಕಾರ್ಯಾಚರಣೆ ನಡೆಸಿ, ಯಶಸ್ವಿಯಾಗಿ ಹೋರಿ ರಕ್ಷಣೆ ಮಾಡಲಾಯಿತು.