ವಿಜಯಪುರ: ನೂತನ ಪಿಂಚಣಿ ವಿರೋಧಿಸಿ ಪೂರ್ವಸಿದ್ಧತೆಗಾಗಿ ಎನ್ಪಿಎಸ್ ಸಂಘಟನೆಗಳು ಓಪಿಎಸ್ ಸಂಕಲ್ಪ ಯಾತ್ರೆಯನ್ನು ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಡಿಸಿ ಕಚೇರಿಯ ವರೆಗೂ ನಡೆಸಿದರು.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿ ಗಾಂಧಿಚೌಕ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ ಮೂಲಕ ಸಾಗಿ ಡಿಸಿಯವರಿಗೂ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪಿಂಚಣಿ ನಮ್ಮ ಹಕ್ಕು ಆಗಿದೆ. ಅದಕ್ಕಾಗಿ ನೂತನ ಪಿಂಚಣಿ ರದ್ದು ಪಡಿಸಿ ಹಳೆ ಪಿಂಚಣಿ ಜಾರಿಗೆ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.