ವಿಜಯಪುರ: ಆರೋಪಿ ಮುಖಕ್ಕೆ ಕಪ್ಪು ಬಟ್ಟೆ ಹಾಕುವ ಬದಲಿಗೆ ಕಪ್ಪು ಪ್ಲಾಸ್ಟಿಕ್ ಹಾಳೆ ಹಾಕಿ ಅಬಕಾರಿ ಪೊಲೀಸರು ಯಡವಟ್ಟು ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ಇನ್ನು ಪೊಲೀಸರ ಯಡವಟ್ಟು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಸೋಮನಿಂಗ ಗುಡಿನ್ನು ಬಂಧಿಸಿ, ಮುಖಕ್ಕೆ ಕಪ್ಪು ಪ್ಲಾಸ್ಟಿಕ್ ಹಾಕಿ ಅಬಕಾರಿ ಪೊಲೀಸರು ಯಡವಟ್ಟು ಮಾಡಿದ್ದಾರೆ. ಅಲ್ಲದೆ, ರೂಡಿ ಅಥರ್ಗಾ ಮಾರ್ಗದ ಪೀರಾಪೂರ ದರ್ಗಾ ಬಳಿ ಗಾಂಜಾ ಸಾಗಾಟ ವೇಳೆಯಲ್ಲಿ ಪೊಲೀಸರು ದಾಳಿಗೈದು ಆರೋಪಿ ಬಂಧಿಸಿದ್ದಾರೆ. ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪ್ಲಾಸ್ಟಿಕ್ ಬ್ಯಾನ್ ವೇಳೆಯಲ್ಲಿ ಪೊಲೀಸರು ಮಹಾ ಯಡವಟ್ಟನಿಂದ್ ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಸಕತ್ ವೈರಲ್ ಆಗುತ್ತಿದೆ.