ವಿಜಯಪುರ:
ನೀರಿಗಾಗಿ ಪ್ರತಿಭಟನೆ ಮಾಡುವ ವೇಳೆಯಲ್ಲಿ ಪ್ರತಿಭಟನಾಕಾರರನ್ನು ಕುತ್ತಿಗೆ ಪಟ್ಟಿ ಹಿಡಿದುಕೊಂಡು ಗೋಳಗುಮ್ಮಟ್ ಪೊಲೀಸರು ಎಳೆದುಕೊಂಡು ಹೋಗಿದ್ದಕ್ಕೆ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿಭಟನೆ ಮಾಡುವುದೇ ತಪ್ಪಾ..? ಪ್ರತಿಭಟನೆಯಲ್ಲಿ ಪೊಲೀಸರು ಗೂಂಡಾವರ್ತನೆ ಮಾಡಿದ್ದು ಎಷ್ಟು ಸರಿ ಎಸ್ಪಿ ಸಾಹೇಬ್ರೇ..?
ಹೌದು..! ವಿಜಯಪುರ ನಗರದ ತೇಗಡೆ ಗಲ್ಲಿಯಲ್ಲಿ ನೀರಿಗಾಗಿ ಪ್ರತಿಭಟನೆ ನಡೆದಿದೆ. ಈ ವೇಳೆಯಲ್ಲಿ ಪೊಲೀಸರು ಏಕಾಏಕಿ ಇಬ್ಬರನ್ನು ಒತ್ತಾಯ ಪೂರ್ವಕವಾಗಿ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಪೊಲೀಸ ಜೀಪ್ ಒಳಗೆ ನುಗ್ಗಿಸಿ ಮಹಿಳೆಯರಿಗೆ ಅವಾಜ್ ಹಾಕಿದ್ದಾರೆ. ಇನ್ನೂ ಪ್ರತಿಭಟನಾಕಾರರನ್ನು ಬಿಡಿಸಲು ಹೋದ್ರೇ ಪೊಲೀಸರು ಧಮ್ಕಿ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೇ, ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.