ವಿಜಯಪುರ: ವಿಜಯಪುರ ನಗರದ ಪೊಲೀಸ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಶುಕ್ರವಾರ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರಿಗೆ ಪುಷ್ಪಗುಚ್ಛ ಗೌರವ ನಮನ ಸಲ್ಲಿಸಲಾಯಿತು.
ಇನ್ನು ಪೊಲೀಸರ ತ್ಯಾಗ, ಸೇವಾ ಮನೋ ಭಾವನೆ ಸ್ಮರಣೆ ಮಾಡಿದ್ದು, ಅಲ್ಲದೇ, ಜಿಲ್ಲಾ ಪೋಲಿಸ್ ಕರ್ತವ್ಯ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆ ಮಾಡಲಾಯಿತು.
ಮೂರು ಸುತ್ತು ಗುಂಡು ಹಾರಿಸುಬ ಮೂಲಕ ಗೌರವ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಡಿ ಆನಂದಕುಮಾರ, ಹೆಚ್ಚುವರಿ ಅಧೀಕ್ಷಕ ಡಾ.ರಾಮ ಅರಸಿದ್ದಿ ಸೇರಿದಂತೆ ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.