ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಪಿಎಸ್ಐರೊಬ್ಬರ ರಾಜಕೀಯ ಚದುರಂಗದ ಆಡಿಯೋ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣ ಪಂಚಾಯತಿ ಚುನಾವಣೆ ವೇಳೆ ಬಿಜೆಪಿ ಪರ ಮುದ್ದೇಬಿಹಾಳ ಪಿಎಸ್ಐ ರೇಣುಕಾ ಜಕನೂರ್ ಗೇಮ್ ಪ್ಲಾನ್ ಮಾಡಿದ್ದಾರೆ.
ನಾಲತವಾಡ ಪಟ್ಟಣ ಪಂಚಾಯಿತಿ ವಾರ್ಡ್ ನಂ-6 ಬಿಜೆಪಿ ಅಭ್ಯರ್ಥಿ ಕಸ್ತೂರಿ ಪುತ್ರ ಪರಶುರಾಮ ಜೊತೆಗೆ ಪಿಎಸ್ಐ ಮಾತನಾಡಿರುವ ಎನ್ನಲಾದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಚುನಾವಣೆಯ ಸಂದರ್ಭದಲ್ಲಿ ಮತದಾರರ ಸಂಪೂರ್ಣ ಮಾಹಿತಿ ಪಡೆದುಕೊಂಡು ಬಿಜೆಪಿ ಪರವಾಗಿ ಪಿಎಸ್ಐ ರೇಣುಕಾ ಬ್ಯಾಟಿಂಗ್ ಮಾಡಿದ್ದಾರೆ.