ವಿಜಯಪುರ: ಮಹಾನಗರ ಪಾಲಿಕೆಯ ಚುನಾವಣೆ-2022ರ ಹಿನ್ನೆಲೆಯಲ್ಲಿ ಪ್ರಿಸೈಡಿಂಗ್ ಹಾಗೂ ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳಿಗೆ ಅಕ್ಟೋಬರ್ 16ರ ಬೆಳಗ್ಗೆ 10 ಗಂಟೆಗೆ ವಿಜಯನಗರದ ಬಿ.ವಿ.ದರಬಾರ ಹೈಸ್ಕೂಲದಲ್ಲಿ ಪ್ರಥಮ ಹಂತದ ತರಬೇತಿ ನಡೆಯಲಿವೆ.
ಪ್ರಿಸೈಡಿಂಗ್ ಹಾಗೂ ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳು ತರಬೇತಿಗೆ ತಪ್ಪದೇ ಹಾಜರಾಬೇಕು. ಗೈರು ಹಾಜರಾದಲ್ಲಿ ಮತ್ತು ಚುನಾವಣಾ ಕರ್ತವ್ಯ ನಿರ್ಲಕ್ಷಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಎಫ್ಐಆರ್ ದಾಖಲಿಸಿ ಪ್ರಜಾಪ್ರತಿನಿಧಿ ಕಾಯಿದೆ 1951 ಕಲಂ 134ರಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.