ವಿಜಯಪುರ: ಜಿಲ್ಲೆಯ ನೂತನ ಹೆಚ್ಚುವರಿ ಪೊಲೀಸ್ ವರಿಷ್ಢಾಧಿಕಾರಿಯಾಗಿ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೆಲವು ದಿನಗಳ ಹಿಂದೆ ಎಎಸ್ಪಿಯಾಗಿದ್ದ ಡಾ. ರಾಮ ಅರಸಿದ್ದಿ ಅವರು ಐಪಿಎಸ್ ಗ್ರೇಡ್ ಹೊಂದಿದ ಕಾರಣ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ ಮುಂಬಡ್ತಿ ಹೊಂದಿದ ಕಾರಣ ಖಾಲಿ ಇರುವ ವಿಜಯಪುರ ಎಎಸ್ಪಿ ಹುದ್ದೆಗೆ ಶಂಕರ ಮಾರಿಹಾಳ ಅವರನ್ನು ನಿಯುಕ್ತಗೊಳಿಸಿ ರಾಜ್ಯ ಸರ್ಕಾರವು ವಿಜಯಪುರ ಹೆಚ್ಚುವರಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ. ಇಂದು ನೂತನ ಎಎಸ್ಪಿಯಾಗಿ ಶಂಕರ ಮಾರಿಹಾಳ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.