ವಿಜಯಪುರ: ವಿಜಯಪುರ ಜಿಲ್ಲೆಯ
ಮನಗೂಳಿ ಗ್ರಾಮದ ಶ್ರೀಬಸವೇಶ್ವರ ಜಾತ್ರೆ ನಿಮಿತ್ಯ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಬಸವೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆ ಜಾತ್ರೆ ನಿಷೇಧ ಮಾಡಲಾಗಿತ್ತು. ಈ ವರ್ಷ ಗ್ರಾಮದಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲು ಅನಕೂಲವಾಗಿದೆ. ಇದರಿಂದ ಗ್ರಾಮದ ಜನರಲ್ಲಿ ಸಂತಸ ಆಗಿದೆ. ಪಟ್ಟಣದ ಪಂಚಾಯಿತಿಯಿಂದ ಗ್ರಾಮದಲ್ಲಿ ಮರೆವಣಿಗೆ ಮುಖಾಂತರ ಬಸವೇಶ್ವರ ದೇವಸ್ಥಾನಕ್ಕೆ ಕಳಸ ತರಲಾಯಿತು. ತದನಂತರ ಬಸವೇಶ್ವರ ರಥೋತ್ಸವಕ್ಕೆ ಕಳಸವನ್ನು ಎರಿಸಲಾಗುತ್ತದೆ. ಗ್ರಾಮದಲ್ಲಿ ಕಳಸವನ್ನು ತರುವಾಗ ಕರಡಿ ಕುಣಿತ ಮತ್ತು ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ಹಲವಾರು ವಾದ್ಯಗಳಿಂದ ಗ್ರಾಮದಲ್ಲಿ ಮರೆವಣಿಗೆ ಮಾಡಲಾಯಿತು. ಗ್ರಾಮದ ಬಸವೇಶ್ವರ ಜಾತ್ರೆಯ ಅದ್ಧೂರಿಗಾಗಿ ಪ್ರಮುಖ ಪಾತ್ರವನ್ನು ಸೋಮನಗೌಡ ಬ.ಪಾಟೀಲ ಮನಗೂಳಿ ವಹಿಸಿದ್ದರು.