ವಿಜಯಪುರ: ನೂತನವಾಗಿ ಪ್ರಾರಂಭವಾದ ವಿಸ್ತಾರ ನ್ಯೂಸ್ಗೆ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಿದರು.
ವಿಜಯಪುರ ನಗರದ ಪತ್ರಕರ್ತರ ಸಂಘದಲ್ಲಿ ಕೇಕ್ ಕತ್ತರಿಸಿ ಪತ್ರಕರ್ತರು ಶುಭಕೋರಿದರು. ಅಲ್ಲದೇ, ವಿಸ್ತಾರ್ ನ್ಯೂಸ್ ಜಿಲ್ಲಾ ವರದಿಗಾರರಾದ ರಾಜು ಪಾಟೀಲ್ ಮಾತನಾಡಿ, ಪತ್ರಕರ್ತರಿಗೆ ಜಾತಿ ಧರ್ಮ ಇಲ್ಲದೇ ಜೊತೆಗೆ ಕಾರ್ಯನಿರ್ವಹಿಸೋಣ. ಎಲ್ಲ ಪತ್ರಕರ್ತರ ಸಾತ್ ಬೇಕಿದೆ. ಅದಕ್ಕಾಗಿ ದ್ವೇಷ ಮನೋಭಾವ ಬಿಟ್ಟು ಜೊತೆಗೆ ಕೆಲಸ ಮಾಡೋಣ ಎಂದರು.
ಈ ವೇಳೆಯಲ್ಲಿ ಹಿರಿಯ ಪತ್ರಕರ್ತರಾದ ಅಶೋಕ ಯಡಹಳ್ಳಿ, ಪುರುಷೋತ್ತಮ್ ಕುಲಕರ್ಣಿ, ರಾಚಪ್ಪ, ಸುನೀಲ ಭಾಸ್ಕರ್, ಶ್ರೀಶೈಲ್, ಆಸೀಫ್ ಬಾಗವಾನ್, ಕಿರಿಯ ಪತ್ರಕರ್ತರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.