ವಿಜಯಪುರ: ಕಬ್ಬಿಗೆ ಪ್ರತಿ ಟನ್ಗೆ ಹೆಚ್ಚಿನ ದರ ನೀಡಬೇಕೆಂದು ಆಗ್ರಹಿಸಿ ಡಿಸಿ ನೇತೃತ್ವದ ಸಭೆ ವಿಫಲ ಹಿನ್ನಲೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಒಟ್ಟು ಒಂಬತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ಕಬ್ಬು ಬೆಳೆಗಾರರ, ರೈತ ಮುಖಂಡರ ಸಭೆಯನ್ನು ಡಿಸಿ ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರರ ಸಭೆ ಕರೆಯಲಾಗಿತ್ತು.
ಅಲ್ಲದೇ, ರೈತರ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಹೆಚ್ ಡಿ ಆನಂದಕುಮಾರ ಆಲಿಸಿದರು. ಈ ವೇಳೆಯಲ್ಲಿ ರೈತರ ಸಮಸ್ಯೆಗಳಿಗೆ ಸಕ್ಕರೆ ಮಾಲೀಕರು ಸ್ಪಂದಿಸಿಲ್ಲ. ಅದಕ್ಕಾಗಿ ಡಿಸಿ ಕಚೇರಿ ಎದುರು ನೂರಾರು ರೈತರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಇದೇ ವೇಳೆಯಲ್ಲಿ ಕಬ್ಬಿನ ದರ ಹೆಚ್ಚಿಸುವಂತೆ ರೈತರ ಒತ್ತಾಯಿಸಿದರು.