ಮಂಡ್ಯ: ಡಿಕೆ ಚಿಕನ್ ಸೆಂಟರ್ ನಲ್ಲಿ ಸನ್ನಿ ಲಿಯೋನ್ಗಾಗಿ ಬಿಗ್ ಆಫರ್ ನೀಡಲಾಗಿದೆ. ನಟಿ ಸನ್ನಿ ಲಿಯೋನ್ ಫ್ಯಾನ್ಸ್ಗಳಿಗೆ 10% ಡಿಸ್ಕೌಂಟ್ ಜೊತೆಗೆ ಚಿಕನ್ ಸಿಗುತ್ತೆ. ಆದ್ರೇ, 3 ನಿಯಮಗಳನ್ನು ಪೂರೈಸಿದರೆ ಮಾತ್ರ ಸನ್ನಿ ಚಿಕನ್ ಸಿಗುತ್ತದೆ.
ಮಂಡ್ಯದಲ್ಲಿರುವ ಸನ್ನಿ ಲಿಯೋನ್ ಅಭಿಮಾನಿ ಷರತ್ತುಗಳನ್ನು ಹಾಕಿ ಚಿಕನ್ ಕೊಡಲು ಮುಂದಾಗಿದ್ದಾನೆ. ಷರತ್ತುಗಳೆಂದ್ರೇ ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಅವರ ಹತ್ತು ಫೋಟೋಗಳಿರಬೇಕು. ಸನ್ನಿ ಲಿಯೋನ್ ಫೇಸ್ ಬುಕ್ ಮತ್ತು ಇನ್ಸ್ಟಾ ಪೇಜ್ ಗಳನ್ನು ಫಾಲೋ ಮಾಡುತ್ತೀರಬೇಕು. ಸನ್ನಿ ಲಿಯೋನ್ ಅವರ ಎಲ್ಲ ಫೋಟೋಗಳಿಗೂ ಲೈಕ್ ಮತ್ತು ಕಾಮೆಂಟ್ ಮಾಡಿದ್ರೇ 10% ದರದಲ್ಲಿ ಚಿಕನ್ ಅವಕಾಶವಿದೆ.