ವಿಜಯಪುರ: ಸಿನಿಯರ್ ಪುರುಷರ ಹಾಗೂ ಮಹಿಳೆಯರ ಟೆನಿಸ್ಬಾಲ್ ಕ್ರಿಕೆಟ್ ಹಿನ್ನಲೆ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನವೆಂಬರ್ 18ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸ್ಟೇಟ್ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಡಾ. ಅಶೋಕಕುಮಾರ ಜಾಧವ್ ಮಂಗಳವಾರ ಹೇಳಿದರು.
ವಿಜಯಪುರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಅಂದು ನಗರದ ಜಿಲ್ಲಾ ಪಂಚಾಯತ ಆವರಣದಲ್ಲಿ ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇನ್ನೂ ನವೆಂಬರ್ 25ರಿಂದ 30ರ ವರೆಗೂ ವಿಜಯಪುರದಲ್ಲಿ ರಾಷ್ಟ್ರೀಯ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್ಶಿಪ್ದಲ್ಲಿ ಪಾಲ್ಗೊಳ್ಳಲಿರುವ ಪುರುಷರು, ಮಹಿಳೆಯರ ಆಯ್ಕೆಗಾಗಿ ನವೆಂಬರ್ 18ರ ಬೆಳಗ್ಗೆ 9ರ ಒಳಗಾಗಿ ಆಟಗಾರ ತಮ್ಮ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.